ಲವ್ ಬರ್ಡ್ಸ್ ಸಂಸಾರದಲ್ಲಿ ಸಾಮರಸ್ಯ ಮರೆಯಾದರೆ...3.5/5 ****
Posted date: 18 Sat, Feb 2023 � 04:09:03 PM
ಚಿತ್ರದ ಹೆಸರು ಲವ್‌ಬರ್ಡ್ಸ್ ಆದರೂ ಚಿತ್ರಕಥೆಯಲ್ಲಿ ಪ್ರಧಾನವಾಗಿರುವುದು ಗಂಡ ಹೆಂಡತಿ ನಡುವಿನ‌ ಕಥೆ,  ಎಂಜಿನಿಯರ್ ದೀಪಕ್(ಕೃಷ್ಣ) ಹಾಗೂ ಪೂಜಾ(ಮಿಲನಾ ನಾಗರಾಜ್) ಇಬ್ಬರೂ ಪರಸ್ಪರ  ಪ್ರೀತಿಸಿ ಮದುವೆಯಾಗುತ್ತಾರೆ. ಲವ್ ಕಮ್ ಅರೆಂಜ್ ಮ್ಯಾರೇಜ್ ಇದಾಗಿದ್ದು,  ಆರಂಭದಲ್ಲಿ ಇವರ ಜೀವನ  ಚೆನ್ನಾಗಿಯೇ ಇರುತ್ತದೆ.  ದಿನಕಳೆದಂತೆ ಇಬ್ಬರ ನಡುವೆ ಸಾಮರಸ್ಯದ ಕೊರತೆ ಕಾಣಿಸುತ್ತದೆ. ಪ್ರಣಯ ಪಕ್ಷಿಗಳಂತಿದ್ದ ಆ ಜೋಡಿಯ ನಡುವೆ ಹೇಗೆ, ಏಕೆ  ಬಿರುಗಾಳಿ ಬೀಸಿತು ಅನ್ನೋದೇ ಲವ್ ಬರ್ಡ್ಸ ಚಿತ್ರದ  ಕಥಾಹಂದರ.
 
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್  ತೆರೆಮೇಲೆ ಕ್ಯೂಟ್ ಪೇರ್ ಆಗಿ   ಕಾಣಿಸಿಕೊಂಡಿದ್ದಾರೆ.  ಇವರಿಬ್ಬರೂ ತಮ್ಮ  ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತೆರೆಯಮೇಲೆ ಇವರಿಬ್ಬರ ನಡುವಿನ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಇನ್ನು ನಾಯಕನ ತಂದೆ-ತಾಯಿಯಾಗಿ ರಂಗಾಯಣ ರಘು ಮತ್ತು ವೀಣಾಸುಂದರ್, ನಾಯಕಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಧು ಕೋಕಿಲ ತಂತಮ್ಮ ಪಾತ್ರಗಳನ್ನು  ಸಮರ್ಥವಾಗಿ  ನಿಭಾಯಿಸಿದ್ದಾರೆ. ನಾಯಕನ ಸ್ನೇಹಿತನಾಗಿ ಗೌರವ್ ಶೆಟ್ಟಿ ಇಷ್ಟವಾಗುತ್ತಾರೆ. ನಟಿ ಸಂಯುಕ್ತಾ ಹೊರನಾಡು ಮತ್ತೊಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದು ಅವರ ಪಾತ್ರವೂ ಗಮನ ಸೆಳೆಯುವಂತಿದೆ.
 
ಒಂದು ಫ್ಯಾಮಿಲಿ ಎಮೋಷನಲ್ ಕಥೆಗೆ  ಕಾಮಿಡಿ ಟಚ್ ನೀಡಿರುವ  ನಿರ್ದೇಶಕ ಪಿ.ಸಿ. ಶೇಖರ್  ಗಂಡ-ಹೆಂಡತಿಯ ನಡುವಿನ ಸಾಮರಸ್ಯದ ಕಥೆಯನ್ನು ಹೇಳುತ್ತಲೇ, ರಂಜನೆಯನ್ನೂ ನೀಡಿದ್ದಾರೆ. ಆರಂಭದಲ್ಲಿ  ಸರಳ, ಸುಂದರವಾಗಿ ಸಾಗುವ ಕಥೆ ಆನಂತರ ಸ್ವಲ್ಪ ಗಂಭೀರತೆ ಪಡೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಡಾರ್ಲಿಂಗ್ ಕೃಷ್ಣ ಹಿಂದಿನ ಚಿತ್ರವನ್ನೂ ನೆನಪಿಸುತ್ತದೆ. ಚಿತ್ರದ ಕೊನೆಗೆ ಒಂದು ಹೊಸ ಟ್ವಿಸ್ಟ್  ಕೊಡುವ ಮೂಲಕ ನಿರ್ದೇಶಕರು  ಚಿತ್ರಕ್ಕೆ  ತಾತ್ವಿಕ  ಅಂತ್ಯವನ್ನು   ನೀಡಿದ್ದಾರೆ. ಅಭಿನಯದ ವಿಷಯಕ್ಕೆ ಬಂದರೆ ಮಿಲನಾ ನಾಗರಾಜ್ ಚಿತ್ರದಿಂದ ಚಿತ್ರಕ್ಕೆ ಪರಿಪಕ್ವತೆ ಹೊಂದಿದ್ದಾರೆ.  ಡಾರ್ಲಿಗ್ ಕೃಷ್ಣ ಕೂಡ ಭಾವನೆಗಳನ್ನು ವ್ಯಕ್ತಪಡಿಸುವ ಸೀನ್ ಗಳಲ್ಲಿ  ಉತ್ತಮ ಅಭಿನಯ  ನೀಡಿದ್ದಾರೆ. 
 
ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆಗಳು  ಅರ್ಥಪೂರ್ಣವಾಗಿವೆ. ಡಿ. ಶಕ್ತಿಶೇಖರ್ ಅವರು ತಮ್ಮ  ಕ್ಯಾಮೆರಾದಲ್ಲಿ ಇಡೀ ಚಿತ್ರವನ್ನು  ಸುಂದರವಾಗಿ ಮೂಡಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯ ಹಾಡುಗಳು  ಕೇಳಲು, ನೋಡಲು  ಇಷ್ಟವಾಗುತ್ತದೆ. ವೀಕೆಂಡ್ ನಲ್ಲಿ ಫ್ಯಾಮಿಲಿ ಸಮೇತ ವೀಕ್ಷಿಸಲು ಲವ್ ಬರ್ಡ್ಸ್  ಉತ್ತಮ ಅಯ್ಕೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed